ವಿ. ಜಿ. ಇ ಸಂಸ್ಥೆಯು ಪೂರ್ವ ಪ್ರಾಥಮಿಕ ಶಾಲೆಯಿಂದ (ಕನ್ನಡ ಹಾಗೂ ಇಂಗ್ಲಿಷ ಮಾಧ್ಯಮ), ಪೌಡ ಶಾಲೆ, ಪದವಿ ಪೂರ್ವ ಕಾಲೇಜ, ಪದವಿ ಕಾಲೇಜ ಹಾಗೂ ಡಿಪ್ಲೋಮಾ ಕಾಲೇಜಗಳನ್ನು ನಡೆಸುತ್ತಿದೆ.
ಇದರ ಜೊತೆಗೆ ಸಂಸ್ಥೆಯು ನಿರ್ಗತಿಕ ಮಕ್ಕಳ ಕುಟಿರ ಹಾಗೂ ವೃದ್ಧಾಶ್ರಮವನ್ನು ನಡೆಸುತ್ತಿದೆ.
ಗಾಂಧಿವಾದಿ, ಸ್ವಾಂತಂತ್ರ ಹೊರಾಟಗಾರು ಹಾಗೂ ಶಿಕ್ಷಣಪ್ರೇಮಿಯಾದ ಶ್ರೀ ರಾಘವೇಂದ್ರರಾವ ದೇಸಾಯಿ ಯವರು 1922ನೇ ಇಸ್ವಿಯಲ್ಲಿ ಈ ಸಂಸ್ಥೆಯನ್ನು ಪ್ರಾರಂಬಿಸಿದರು. 97 ವಸಂತ ಪುರೈಸಿರುವ ಸಂಸ್ಥೆಯು ಹಿಂದುಳಿದ ಪ್ರದೇಶವಾದ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಜಾತಿ, ಮತ, ಪಂತವೆನ್ನದೇ ವಿದ್ಯಾರ್ಜನೆ ನಿಡುತ್ತಿದೆ. ಈಗ ಸಂಸ್ಥೆ ಸುಮಾರು 28 ಎಕರೆ ಜಮೀನಿನಲ್ಲಿ, ಸುಮಾರು 2000 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸ ಕೊಡುತ್ತಿದೆ.
ಸಂಸ್ಥೆಯು ಬಡ ನಿರ್ಗತಿಕ ಮಕ್ಕಳಿಗೆ ಉಚಿತ ವಸತಿ ಹಾಗೂ ವಿದ್ಯಾಬ್ಯಾಸ ಕೊಡುತ್ತಿದೆ. ಇದನ್ನು ಕಂಡ ರಾಜ್ಯ ರೂ. 25000/- ಹಾಗೂ ಪ್ರಶಸ್ತಿಯನ್ನು ಕೊಟ್ಟಿರುತ್ತಾರೆ.
ಅದೇರೀತಿ ಕೇಂದ್ರ ಸಾರ್ಕಾರವೂ ರೂ 2,00,000.00 ಗಳೂಂದಿಗೆ ರಾಷ್ಟ್ರೀಯ ಪುರಸ್ಕಾರ ಕೊಟ್ಟಿರುತ್ತಾರೆ
1984-85 ರಲ್ಲಿ ಪ್ರಾರಂಭವಾದ ಪಾಲಿಟೆಕ್ನಕ್ 12 ಎಕರೆ ಜಾಗೆಯನ್ನು ಹೊಂದಿರುತ್ತದೆ. ಇದು ಅವಿಭಾಜಿತ ರಾಯಚೂರು ಜಿಲ್ಲೆಯಲ್ಲೆ ಪ್ರಥಮ ಪಾಲಿಟೆಕ್ನಿಕ್ ಎಂದು ಹೆಳಲು ಹೆಮ್ಮೆಯನಿಸುತ್ತದೆ. ಈಗಾಗಲೆ 34 ವಸಂತ ಪೂರೈಸಿರುವ ಕಾಲೇಜ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣಕೊಡುವಲ್ಲಿ ಯಶಶ್ವಿಯಾಗಿ ಮುನ್ನುಗ್ಗುತ್ತಿದೆ.
ಗಾಂಧಿವಾದಿ, ಸ್ವಾಂತಂತ್ರ ಹೊರಾಟಗಾರು ಹಾಗೂ ಶಿಕ್ಷಣಪ್ರೇಮಿಯಾದ ಶ್ರೀ ರಾಘವೇಂದ್ರರಾವ ದೇಸಾಯಿ ಯವರು 1922ನೇ ಇಸ್ವಿಯಲ್ಲಿ ಈ ಸಂಸ್ಥೆಯನ್ನು ಪ್ರಾರಂಬಿಸಿದರು. 97 ವಸಂತ ಪುರೈಸಿರುವ ಸಂಸ್ಥೆಯು ಹಿಂದುಳಿದ ಪ್ರದೇಶವಾದ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಜಾತಿ, ಮತ, ಪಂತವೆನ್ನದೇ ವಿದ್ಯಾರ್ಜನೆ ನೀಡುತ್ತಿದೆ.
1984 ರಲ್ಲಿ ವಿದ್ಯಾನಂದ ಗುರುಕುಲ ರೂಲಲ್ ಪಾಲಿಟೆಕ್ನಕ್ ನಂತರದಲ್ಲಿ ಡಾ. ಜಿ. ಎಸ್. ಎಮ್. ಆರ್ ಪಾಲಿಟೆಕ್ನಿಕ್ ಎಂದು ನಾಮಕರಣಗೊಂಡಿತು. ಪ್ರಾರಂಬದಲ್ಲಿ 2 ವಿಭಾಗಗಳನ್ನು ಪ್ರಾರಂಬಿಸಿದ ಕಾಲೇಜ ನಂತರದಲ್ಲಿ ಮತ್ತೇರಡು ವಿಭಾಗದೊಂದಿಗೆ ಒಟ್ಟು ನಾಲ್ಕು ಕೊರ್ಸಗಳನ್ನು ಹೊಂದಿರುತ್ತದೆ.
1. ಇಲೆಕ್ಟ್ರಾನಿಕ್ಸ ಮತ್ತು ಕಮ್ಯೂನಿಕೆಶನ್ ಇಂಜಿನೀಯರಿಂಗ್
2. ಸಿವಿಲ್ ಇಂಜಿನೀಯರಿಂಗ್
3. ಮೆಕಾನಿಕಲ್ ಇಂಜಿನೀಯರಿಂಗ್
4. ಕಂಪ್ಯೂಟರ್ ಸೈನ್ಸ ಇಂಜಿನೀಯರಿಂಗ್
ಕಾಲೇಜ ಉತ್ತಮ ಉಪನ್ಯಾಸಕರು ಹಾಗೂ ಸಿಬ್ಬಂದಿಯವರನ್ನು ಹಾಗೂ ಉತ್ತಮ ಪ್ರಾಯೋಗಾಲಗಳನ್ನು ಹೊಂದಿದ್ದು ಸುತ್ತಮುತ್ತಲಿನ ಪಾಲಿಟೆಕ್ನಕ್ಗೆ ಮಾದರಿಯಾಗಿದೆ. ನಮ್ಮ ಜಿಲ್ಲೆ ಹಾಗೂ ನೆರೆಯ ಗದಗ ಜಿಲ್ಲೆಯ ವಿದ್ಯಾರ್ಥಿಗಳು ನಮ್ಮ ಕಾಲೇಜಿಗೆ ಬಂದು ತಮ್ಮ ಪ್ರಯೋಗಗಳನ್ನು ನಮ್ಮ ಪ್ರಯೋಗಾಲಯದಲ್ಲಿ ಪೂರೈಸುತ್ತಾರೆ.